ಗುರುವಾರ, ಮಾರ್ಚ್ 3, 2011

ರಂಗಿನ ಚಿಟ್ಟೆ - ನನ್ನ ಕವನ


ರಂಗಿನ ಚಿಟ್ಟೆ

ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ


ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ
ಬಣ್ಣ ಬಣ್ಣದ ರೆಕ್ಕೆಯ ಜೋಡಿಸಿದೆ
ಸುಂದರ ಪ್ರಪಂಚವ ಸೃಷ್ಟಿಸಿದೆ
ಪ್ರೀತಿಯ ಅಂಕುರವ ಅದಕ್ಕಿಟ್ಟಿದ್ದೆ


ಇದು ಮನಸ್ಸಿನ ಮಾಯಾಲೋಕ
ರಮಣೀಯವಾಗಿರುವ ಪ್ರೇಮಲೋಕ
ಕನಸ್ಸುಗಳ ಸೃಷ್ಟಿಯ ಬ್ರಹ್ಮ ಲೋಕ
ಊಹೆಗೂ ಮೀರಿದ ಕಲ್ಪನಾಲೋಕ


ಹುಡುಕುತ್ತಿರುವೆ ಈ ಪ್ರೀತಿಯ ಮೂಲವೆಲ್ಲಿ
ಕರಗಿಹೋದ ಸುಂದರ ಕ್ಷಣಗಳಲ್ಲಿ
ಅದ್ಭುತವೆನ್ನುವ ಕಿನ್ನರಲೋಕದಲ್ಲಿ
ಮರೆಯಾದ ಕಲ್ಪನಾ ಸಾಮ್ರಾಜ್ಯದಲ್ಲಿ


ಪ್ರೀತಿ-ಪ್ರೇಮವೇ ಲೋಕದ ಸೃಷ್ಟಿಗೆ ಮೂಲ
ಮತ್ತೆ ಸಿಗದು ಕಳೆದುಹೋದ ಕಾಲ
ಭೇದಿಸಲಾಗದು ಪ್ರೀತಿಯ ಮಾಯಾಜಾಲ
ನಿಗೂಢವಾಗಿಯೇ ಉಳಿದಿದೆ ಈ ಇಂದ್ರಜಾಲ

-.ಮಾ.ಕೃ.ಮ

7 ಕಾಮೆಂಟ್‌ಗಳು:

sunitha ಹೇಳಿದರು...

ಹಾಯ್ ಮಂಜು ರಂಗಿನ ಚಿಟ್ಟೆ ಬಣ್ಣ ಬಣ್ಣದ ಕನಸ್ಸುಗಳನ್ನು ಹೊತ್ತು ಸದಾ ನಿಮ್ಮ ಜೀವನದಲ್ಲಿ ಕಂಗೊಳಿಸುತ್ತಿರಲಿ.....

sunitha ಹೇಳಿದರು...

ನಿಮ್ಮ ಬ್ಲಾಗ್ ನಿಜಕ್ಕೂ ಅದ್ಬುತ ಕಣ್ರೀ.... ಹೀಗೆ ಬರೆಯುತ್ತಿರಿ.....

RAJEEV ಹೇಳಿದರು...

HAI MANJU NIMMA BLOG TUMBA CHENNAGIDE....

ರಮ್ಯಶ್ರೀ ಹೇಳಿದರು...

ಈ ನಿಮ್ಮ ಕನ್ನಡ ಲೋಕ ನಿಜಕ್ಕೂ ತುಂಬ ಅದ್ಭುತ. ಕನ್ನಡ ಬರಹ ಇನ್ನಷ್ಟೂ ಮೂಡಿಬರಲಿ ಎಂದು ಹಾರೈಸುತ್ತೇನೆ.

shivaraj ಹೇಳಿದರು...

hai manju ranginachitte kavana chennagide. i like it.

ರಮ್ಯ ಹೇಳಿದರು...

ನಿಮ್ಮ ಕನಸಿನ ಚಿಟ್ಟೆ ಸುಂದರವಾಗಿದೆ

ಕಾವ್ಯ ಬೆಂಗಳೂರು ಹೇಳಿದರು...

ಮಂಜು ಈ ನಿಮ್ಮ ಕನಸಿನಲ್ಲಿ ಕಂಗೊಳಿಸುತ್ತಿರುವ ರಂಗಿನಚಿಟ್ಟೆ ಯಾರು? ತಿಳಿಸುವಿರಾ.