ಗುರುವಾರ, ಅಕ್ಟೋಬರ್ 16, 2008

ಅಮೃತ ಮುತ್ತು - ನನ್ನ ಕವನ
ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ

ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ

ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು
-ಮಾ.ಕೃ.ಮ*

2 ಕಾಮೆಂಟ್‌ಗಳು:

Anonymous ಹೇಳಿದರು...

ಸಾವಿಗೆ ಅಂಜದೇ ಕೊಟ್ಟಳು ಜನ್ಮಈ ಋಣವ ತೀರಿಸಲು ಸಾಲದು ಈ ಜನ್ಮ e salugalu nanage tumba edisidavu. tayiye devarigintha migiladavalu.
*ramya*

pooja ಹೇಳಿದರು...

ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ


ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ


ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು salugalu nanage tumba edisidavu. tayiye devarigintha migiladavalu ela satya kanri